  ಕುನ್ನತ್ತೂರು  

 ತಮಿಳುನಾಡಿನ ಚೆಂಗಲ್‍ಪಟ್ಟು ಜಿಲ್ಲೆಯಲ್ಲಿರುವ ಒಂದು ಗ್ರಾಮ. ತಮಿಳು ಶೈವ ಸಾಹಿತ್ಯದ ಪೆರಿಯ ಪುರಾಣದ ಕರ್ತೃ ಶೇಕ್ಕಿಳಾರರ ಜನ್ಮ ಸ್ಥಳ. ಚೋಳರ ಮತ್ತು ವಿಜಯನಗರ ಕಾಲದ ದೇವಾಲಯಗಳೂ ಇಲ್ಲಿವೆ. ಕ್ರಿ. ಪೂ. 1ನೆಯ ಸಹಸ್ರಮಾನದಲ್ಲಿ ದಕ್ಷಿಣ ಭಾರತದಲ್ಲಿ ಪ್ರಸರಿಸಿದ್ದ ಬೃಹತ್ ಶಿಲಾ ಸಮಾಧಿ ಸಂಸ್ಕøತಿಯ ಅವಶೇಷಗಳು ಇಲ್ಲಿ ನಡೆಸಲಾದ ಉತ್ಖನನಗಳಿಂದ ಬೆಳಕಿಗೆ ಬಂದಿವೆ.     

 (ಬಿ.ಕೆ.ಜಿ.)

 

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ